Consumer
ನಿಮ್ಮ ಅಡುಗೆಮನೆಯಲ್ಲಿ ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಚಿಂತೆಮುಕ್ತರಾಗಿ ಇರಿ

ಪ್ರತಿ ಮನೆಯಲ್ಲಿ ಅಡುಗೆಮನೆಯು ಒಂದು ಪ್ರಮುಖವಾದ ಹಾಗೂ ಇಷ್ಟಪಡುವ ಒಂದು ಸ್ಥಳವಾಗಿರುತ್ತದೆ. ಅಡುಗೆ ಮಾಡಲು ಬಳಸಲ್ಪಡುವ ಉದ್ದೇಶವನ್ನು ಅದು ಹೊಂದಿರುತ್ತದೆ. ನಮ್ಮ ರುಚಿಯಾದ ಅಡುಗೆಯನ್ನು ಮಾಡುತ್ತಾ ನಮ್ಮ ಸಮಯವನ್ನು ಅಲ್ಲಿ ನಾವು ಕಳೆಯುತ್ತೇವೆ. ಹಾಗೆ ಮಾಡುವಾಗ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಪರಮೋಚ್ಛ ಪ್ರಾಧಾನ್ಯತೆಯಾಗಿರುತ್ತದೆ.

ಸೆಂಚುರಿಪ್ಲೈದಿಂದ ಕಂಡುಹಿಡಿಯಲ್ಪಟ್ಟು, ಪ್ಲೈವುಡ್‌ನಲ್ಲಿ ಸಂಯೋಜಿಸಲ್ಪಟ್ಟಿರುವ ಇತ್ತೀಚಿನ ಕ್ರಾಂತಿಕಾರಕ ಫೈರ್‌ವಾಲ್‌ ತಂತ್ರಜ್ಞಾನದ ಬಗೆಗಿನ ಎಲ್ಲ ವಿವರಗಳನ್ನು ಈ ಮುಂದಿನ ಲೇಖನವು ಅನ್ವೇಷಿಸುತ್ತದೆ. ಅಗ್ನಿ ಅವಘಡದ ದುರದೃಷ್ಟಕರ ಸಂದರ್ಭವೊಂದರಲ್ಲಿ ಪ್ರಯೋಜನಕಾರಿಯಾಗುವ ಅನೇಕ ಅವಶ್ಯಕ ಗುಣಗಳನ್ನು ಇದು ಹೊಂದಿದ್ದು, ಅಗ್ನಿ ಅನಾಹುತಗಳೊಂದಿಗೆ ಹೋರಾಡಲು ಪರವಾನಗಿಯನ್ನು ಹೊಂದಿದೆ.

ವಿಷಯ ಕೋಷ್ಟಕ

➔ ಫೈರ್‌ವಾಲ್‌ ತಂತ್ರಜ್ಞಾನವನ್ನು ಸಂಯೋಜಿಸಿಕೊಂಡಿರುವ ಈ ಶತಮಾನದ ಪ್ಲೈವುಡ್‌ ಅನ್ನು ಏಕೆ ಆಯ್ಕೆ ಮಾಡಬೇಕು?

➔ ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಬೆಸೆಯಲ್ಪಟ್ಟಿರುವ ಸೆಂಚುರಿಪ್ಲೈ ಉತ್ಪನ್ನಗಳು

➔ ಸಾಮಾನ್ಯ ಪ್ಲೈವುಡ್‌ನಿಂದ ಸೆಂಚುರಿಪ್ಲೈ ಉತ್ಪನ್ನಗಳನ್ನು ವಿಭಿನ್ನವಾಗಿಸುವ ಅಂಶ ಯಾವುದು?

➔ ತೀರ್ಮಾನ


ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಈ ಶತಮಾನದ ಪ್ಲೈವುಡ್‌ ಅನ್ನು ಏಕೆ ಆಯ್ಕೆ ಮಾಡಬೇಕು?

ಅತ್ಯುತ್ತಮ ಬೆಂಕಿ-ನಿರೋಧಕ ಗುಣಗಳನ್ನು ಒದಗಿಸುವ ಫೈರ್ವಾಲ್ ತಂತ್ರಜ್ಞಾನದಲ್ಲಿ ಪ್ಲೈವುಡ್‌ನ ಪಾಲಿಮರ್‌ ಮ್ಯಾಟ್ರಿಕ್ಸ್‌ನಲ್ಲಿ ಹುದುಗಿಸಲ್ಪಟ್ಟ ನ್ಯಾನೊ-ಇಂಜಿನೀಯರ್ಡ್‌ ಕಣಗಳು ಬಳಕೆ ಮಾಡಲ್ಪಡುತ್ತವೆ.


ಭಾರತದಲ್ಲಿ ಅಗ್ನಿ ಅನಾಹುತಗಳ ಬಗೆಗಿನ ದುರಂತ ಸಮಾಚಾರಗಳ ಸರಣಿಯನ್ನು ಆಗಾಗ್ಗೆ ನಾವು ಕೇಳುತ್ತೇವೆ. ಮನೆಗಳಲ್ಲಿ ಬೆಂಕಿಯು ಪಸರಿಸುವಲ್ಲಿ ಪೀಠೋಪಕರಣವು ಒಂದು ಪ್ರಮುಖ ಅಂಶವಾಗಿದೆ. ಇಂಥ ಮಾರಕ ವಿನಾಶದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ಲೈವುಡ್‌ನಲ್ಲಿ ಬೆಸೆಯಲ್ಪಟ್ಟಿರುವ ಫೈರ್‌ವಾಲ್‌ ತಂತ್ರಜ್ಞಾನವನ್ನು ಆಯ್ಕೆ ಮಾಡುವುದು ವಿವೇಕಯುತವಾಗಿರುತ್ತದೆ. ಅಡುಗೆಮನೆಯಲ್ಲಿ, ಅಡುಗೆಯನ್ನು ಮಾಡಲು ಬೆಂಕಿಯನ್ನು ನಾವು ಬಳಸುತ್ತೇವೆ. ಸುರಕ್ಷತೆಯನ್ನು ಆಯ್ಕೆ ಮಾಡಿಕೊಂಡು, ಮನಶಾಂತಿಯೊಂದಿಗೆ ಅಡುಗೆ ಮಾಡುವುದನ್ನು ಆನಂದಿಸುವುದು ಅತ್ಯಾವಶ್ಯವಾಗಿರುತ್ತದೆ. ಫೈರ್‌ವಾಲ್‌ ತಂತ್ರಜ್ಞಾನವನ್ನು ಬಳಸುವ ಮೂಲಕ ಬೆಂಕಿ ವಿಸ್ಫೋಟಗಳ ಈ ಮುಂದಿನ ತತ್ಪರಿಣಾಮಗಳನ್ನು ಆದ್ದರಿಂದ ನಾವು ತಪ್ಪಿಸಬಹುದು:

● ಅಗ್ನಿ ಅನಾಹುತವು ಓರ್ವ ವ್ಯಕ್ತಿಯನ್ನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಾಶಪಡಿಸಬಲ್ಲದು ಮತ್ತು ಅವರ ಆತ್ಮವಿಶ್ವಾಸದ ಮೇಲೆ ದೀರ್ಘ-ಕಾಲಿಕ ಪರಿಣಾಮವನ್ನು ಹೊಂದಿರುತ್ತದೆ.

● ಜೀವ ಮತ್ತು ಇತರ ಸ್ವತ್ತುಗಳಿಗೆ ದುರಸ್ತಿಪಡಿಸಲಾಗದ ಹಾನಿ.

● ಅಗ್ನಿ ಅನಾಹುತದ ಸಂದರ್ಭದಲ್ಲಿ ಬಿಡುಗಡೆಯಾಗುವ ವಿಷಕಾರಿ ಅನಿಲಗಳು ಹಾಗೂ ಹೊಗೆಯಿಂದ ಉಂಟಾಗುವ ಉಸಿರುಗಟ್ಟುವಿಕೆಯಿಂದ ಮರಣವು ಅಗ್ನಿ ಅನಾಹುತದ ಒಂದು ಅನಪೇಕ್ಷಿತವಾದ ಪಾರ್ಶ್ವ ತತ್ಪರಿಣಾಮವಾಗಿರುತ್ತದೆ.

● ಅಗ್ನಿ ಅವಘಡಗಳ ಸಂದರ್ಭದಲ್ಲಿ, ಮಾನವನ ಮನಸ್ಸು ಗಾಬರಿಯಾಗತೊಡಗುತ್ತದೆ, ಮತ್ತು ಸಮಂಜಸ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿಬಿಡುತ್ತದೆ.

ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಉತ್ಪನ್ನಗಳು

ಈ ಕೆಳಗಿನವುಗಳು ಫೈರ್ವಾಲ್ ತಂತ್ರಜ್ಞಾನವನ್ನು ಹೊಂದಿರುವ ಕೆಲವು ಜನಪ್ರಿಯ ಸೆಂಚುರಿಪ್ಲೈ ಉತ್ಪನ್ನಗಳಾಗಿವೆ:​​​​​​​

ಕ್ಲಬ್‌ ಪ್ರೈಮ್

ಭಾರತೀಯ ಮಾನಕ ಬ್ಯೂರೊ ಪ್ರಕಾರ, ಇದು 25 ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿರುವ ಏಕಮಾತ್ರ ಪ್ಲೈವುಡ್‌ ಶೀಟ್‌ ಆಗಿದೆ. 4 ಮಿಮೀ, 6 ಮಿಮೀ, 9 ಮಿಮೀ, 12 ಮಿಮೀ, 16 ಮಿಮೀ, ಹಾಗೂ 19 ಮಿಮೀ ಸೇರಿದಂತೆ ಬೇರೆಬೇರೆ ಗಾತ್ರಗಳ ಶ್ರೇಣಿಯೊಂದರಲ್ಲಿ ಇದು ಬರುತ್ತದೆ. 30-ವರ್ಷಗಳ ವಾರಂಟಿಯೊಂದನ್ನು ಇದು ಹೊಂದಿದೆ. ಹೆಚ್ಚುವರಿಯಾಗಿ, ಅಸಾಧಾರಣ ಗುಣದ, ಕೈಗೆಟುಕುವ ಬೆಲೆಯ ಹಾಗೂ ಬಹುಮುಖ ಪ್ರಯೋಜನದ ಪ್ಲೈವುಡ್‌ ಶೀಟ್‌ ಇದಾಗಿದ್ದು, ಈ ಮುಂದಿನವುಗಳನ್ನು ಒಳಗೊಂಡ ಕ್ರಾಂತಿಕಾರಕ ತಂತ್ರಜ್ಞಾನದ ವೈಶಿಷ್ಟ್ಯತೆಯನ್ನು ಹೊಂದಿದೆ,​​​​​​​

● ಫೈರ್‌ವಾಲ್- ಬೆಂಕಿಯಿಂದ ರಕ್ಷಿಸುತ್ತದೆ.

● ವೈರೊಕಿಲ್- ವೈರಸ್‌ಗಳನ್ನು ನಾಶಪಡಿಸುವ ಮೂಲಕ ರಕ್ಷಿಸುತ್ತದೆ.

● ಗ್ಲ್ಯೂ ಲೈನ್‌ ಪ್ರೊಟೆಕ್ಷನ್ – ಗೆದ್ದಲು ಹಾಗೂ ಕೊರಕಗಳಿಂದ ಸಂಪೂರ್ಣ ರಕ್ಷಣೆಯನ್ನು ಒದಗಿಸಲು ಪ್ರತಿ ಪದರವು ಉಪಚರಿಸಲ್ಪಟ್ಟಿದ್ದು, ಬಾಳಿಕೆಯನ್ನು ಹೆಚ್ಚಿಸುತ್ತದೆ.

● ಗ್ಲ್ಯೂ ಶಿಯರ್‌ ಸ್ಟ್ರೆಂಗ್ತ್‌ - ಬಲವನ್ನು ಒದಗಿಸುತ್ತದೆ

● ಅಗತ್ಯ ಸಂಯೋಜನೆ – ಅಂತರಗಳು ಮತ್ತು ಮೇಲು ವ್ಯಾಪಿಸುವಿಕೆ ಇಲ್ಲ

● ಬಲ ಮತ್ತು ಆಕಾರ ಧಾರಣೆ

● ಕುದಿ ಜಲನಿರೋಧಕ (ಬಾಯ್ಲಿಂಗ್‌ ವಾಟರ್‌ಪ್ರೂಫ್)

ಆರ್ಕಿಟೆಕ್ಟ್‌ ಪ್ಲೈ

ಅತ್ಯುನ್ನತವಾದ ಈ ಉತ್ಪನ್ನವು ಅನನ್ಯವಾದ ಹಾರ್ಡ್‌ವುಡ್‌ ಜಾತಿಗಳಿಂದ ಸೃಷ್ಟಿಸಲ್ಪಟ್ಟಿದ್ದು, BWP ಗ್ರೇಡ್‌ನ ಸಿಂಥೆಟಿಕ್‌ ರೆಸಿನ್‌ನೊಂದಿಗೆ ಬಂಧಿಸಲ್ಪಟ್ಟಿದೆ. ಕ್ಲಬ್‌ ಪ್ರೈಮ್‌ನಂತೆಯೇ 4 ಮಿಮೀ, 6 ಮಿಮೀ, 9 ಮಿಮೀ, 12 ಮಿಮೀ, 16 ಮಿಮೀ, 19 ಮಿಮೀ ಹಾಗೂ 25 ಮಿಮೀ ಗಾತ್ರಗಳಲ್ಲಿ ಇದು ಬರುತ್ತದೆ. 4-ಪಟ್ಟು ಮನಿ-ಬ್ಯಾಕ್ ಗ್ಯಾರಂಟಿಯನ್ನು ಇದು ಹೊಂದಿದೆ. ಲೈಫ್‌ಟೈಮ್‌ ವಾರಂಟಿ ಸಹ ಇದೆ. ಈ ಮುಂದಿನ ಅತ್ಯುನ್ನತವಾದ ತಾಂತ್ರಿಕತೆಗಳೊಂದಿಗೆ ಆರ್ಕಿಟೆಕ್ಟ್‌ ಪ್ಲೈ ಸಜ್ಜುಗೊಳಿಸಲ್ಪಟ್ಟಿದೆ-​​​​​​​

● ಫೈರ್‌ವಾಲ್‌ ತಂತ್ರಜ್ಞಾನ: ಬೆಂಕಿ ಸುರಕ್ಷತೆಯನ್ನು ಖಚಿತಪಡಿಸುತ್ತದೆ

● ವೈರೊಕಿಲ್‌ ತಂತ್ರಜ್ಞಾನ: ವೈರಸ್‌ಗಳನ್ನು ನಿರ್ಮೂಲನೆ ಮಾಡುವ ಮೂಲಕ ರಕ್ಷಿಸುತ್ತದೆ

● ಕುದಿ ಜಲನಿರೋಧಕವಾಗಿದೆ‌ (ಬಾಯ್ಲಿಂಗ್‌ ವಾಟರ್‌ಪ್ರೂಫ್)

● ಕನಿಷ್ಟತಮ ತಿರುಚುವಿಕೆ, ಹಾಗೂ ಬಾಗುವಿಕೆ ನಿರೋಧಕವಾಗಿದೆ

● ಅಗತ್ಯ ಸಂಯೋಜನೆ – ಅಂತರಗಳು ಮತ್ತು ಮೇಲು ವ್ಯಾಪಿಸುವಿಕೆ ಇಲ್ಲ

● ಗೆದ್ದಲು ಮತ್ತು ಕೊರಕ ನಿರೋಧಕವಾಗಿದೆ

ಸಾಮಾನ್ಯ ಪ್ಲೈವುಡ್‌ನಿಂದ ಸೆಂಚುರಿಪ್ಲೈ ಉತ್ಪನ್ನಗಳನ್ನು ವಿಭಿನ್ನವಾಗಿಸುವ ಅಂಶ ಯಾವುದು?

ಸಾಮಾನ್ಯ ಪ್ಲೈವುಡ್‌ ಕೆಲವೇ ನಿಮಿಷಗಳೊಳಗೆ ಬೆಂಕಿಯನ್ನು ಪಸರಿಸುವ ಒಂದು ಮಾಧ್ಯಮವಾಗಿ ವರ್ತಿಸುತ್ತದೆ ಹಾಗೂ ಆರಂಭಗೊಂಡ ನಂತರ ಕ್ಷಿಪ್ರವಾಗಿ ನಾಶವಾಗುತ್ತದೆ. ಹೆಚ್ಚುವರಿಯಾಗಿ, ಬಹಳಷ್ಟು ಹೊಗೆಯನ್ನು ಅದು ಉತ್ಪಾದಿಸುತ್ತದೆ. ಹೊಗೆಯಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತದೆ, ಹೊಗೆಯಿಂದ ಉಸಿರುಗಟ್ಟಿ ಮರಣವು ಉಂಟಾಗಬಹುದು ಹಾಗೂ ಶೀಘ್ರವಾಗಿ ವ್ಯಾಪಿಸುವ ಬೆಂಕಿಯ ಕೆನ್ನಾಲಿಗೆಯು ಅದರ ದಾರಿಯಲ್ಲಿನ ಪ್ರತಿಯೊಂದನ್ನೂ ಸ್ವಾಹಾ ಮಾಡಿಬಿಡುತ್ತದೆ. ಏನಾಗುತ್ತಿದೆ ಎಂದು ಎಚ್ಚತ್ತುಕೊಂಡು, ಕಾರ್ಯಪ್ರವೃತ್ತರಾಗುವ ಮೊದಲೇ ರೌದ್ರಾವತಾರದ ಬೆಂಕಿಯಿಂದ ಜೀವ ನಷ್ಟ, ಆಘಾತ, ಗಾಯಗಳು, ಮಾನಸಿಕ ಸಮಸ್ಯೆಗಳು, ಭಾವನಾತ್ಮಕ ಹಾಗೂ ಆರ್ಥಿಕ ಅಸ್ಥಿರತೆ, ಮತ್ತು ಅಮೂಲ್ಯವಾದ ವಸ್ತುಗಳು ಹಾಳಾಗಿಹೋಗುವಂಥ ಹಿಮ್ಮುಖಗೊಳಿಸಲಾಗದಂಥ ನಷ್ಟಗಳು ಉಂಟಾಗುತ್ತವೆ. ​​​​​​​

19 ಮಿಮೀ ದಪ್ಪದ ಆರ್ಕಿಟೆಕ್ಟ್‌ ಪ್ಲೈ ಹಾಗೂ ಕ್ಲಬ್‌ ಪ್ರೈಮ್‌ ಪ್ಲೈವುಡ್‌ ಇವುಗಳು ದಹನಶೀಲತೆ, ಹರಡಲ್ಪಡುವಿಕೆ, ಒಳತೂರಲ್ಪಡುವಿಕೆ ಹಾಗೂ ಧೂಮ-ಬೆಳವಣಿಗೆ ಸೂಚ್ಯಂಕಗಳನ್ನು ಒಳಗೊಂಡ ಪ್ರಮುಖ ಮಾನದಂಡಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡಲ್ಪಟ್ಟಾಗ ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಪ್ರೈಮ್‌ ಪ್ಲೈವುಡ್‌ ಭಾರತೀಯ, ಅಮೆರಿಕ ಹಾಗೂ ಬ್ರಿಟಿಶ್‌ ಮಾನಕಗಳಿಂದ ವರ್ಗದಲ್ಲಿಯೇ ಅತ್ಯುತ್ತಮ ಎಂಬುದಾಗಿ ಗುರುತಿಸಲ್ಪಟ್ಟಿವೆ. ಬೆಂಕಿಯ ಪ್ರಸರಣವನ್ನು ನಿಯಂತ್ರಿಸುವ ಹಾಗೂ ಹೊಗೆಯ ಉತ್ಪತ್ತಿಯನ್ನು ಕಡಿಮೆ ಮಾಡುವ ಮೂಲಕ ಅದರ ಸ್ವಯಂ-ವಿನಾಶಕ ಪರಿಣಾಮಗಳ ವಿರುದ್ಧ ಹೋರಾಡಲು ಅವುಗಳು ಸಜ್ಜುಗೊಂಡಿವೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ನೆರವಾಗುತ್ತದೆ ಹಾಗೂ ಕಾರ್ಯಪ್ರವೃತ್ತರಾಗಿ, ತಮ್ಮ ಜೀವ ಹಾಗೂ ಇತರರ ಜೀವಗಳನ್ನು ಉಳಿಸಿಕೊಳ್ಳಲು, ಅಥವಾ ಅಗ್ನಿ ಶಾಮಕ ಇಲಾಖೆ, ಆ್ಯಂಬ್ಯುಲನ್ಸ್‌ ಮುಂತಾದವುಗಳಿಗೆ ಕರೆ ಮಾಡಲು ನಿರ್ಣಾಯಕ ಸಮಯವನ್ನು ಬಳಕೆದಾರರಿಗೆ ಒದಗಿಸುತ್ತದೆ. ಬೆಂಕಿಯ ಮೂಲವು ತೆಗೆದುಹಾಕಲ್ಪಟ್ಟ ನಂತರ, ಈ ಬೆಂಕಿಯೂ ಸಹ ತನ್ನನ್ನು ತಾನೇ ನಂದಿಸಿಕೊಳ್ಳುತ್ತದೆ.​​​​​​​

ಪ್ರಯೋಜನಗಳು

ಸೆಂಚುರಿಪ್ಲೈ ಫೈರ್-ರಿಟಾರ್ಡಂಟ್ ಪ್ಲೈವುಡ್‌ ಅನ್ನು ಬಳಸುವ ಮೂಲಕ ನೀವು ಪಡೆಯಬಹುದಾದ ಅನುಕೂಲತೆಗಳು ಹೀಗಿವೆ:

● ಸೆಂಚುರಿಪ್ಲೈರವರ ಫೈರ್-ರಿಟಾರ್ಡಂಟ್ ಪ್ಲೈವುಡ್ ಬೆಂಕಿಯು ತನ್ನ ಮೇಲ್ಮೈ ಮೇಲೆ ಅಥವಾ ಸಮೀಪದಲ್ಲಿರುವ ವಸ್ತುಗಳಿಗೆ ಹರಡಲು ಬೇಕಾಗುವ ಸಮಯವನ್ನು ದೀರ್ಘವಾಗಿಸುತ್ತದೆ. ಈ ಗುಣಲಕ್ಷಣವು ನಿಮ್ಮ ಪ್ರೀತಿಪಾತ್ರರನ್ನು ಹಾಗೂ ನಿಮ್ಮನ್ನು ರಕ್ಷಿಸಿಕೊಳ್ಳಲು ಬೇಕಾಗುವಷ್ಟು ನಿರ್ಣಾಯಕ ಸಮಯವನ್ನು ನಿಮಗೆ ಒದಗಿಸುತ್ತದೆ.

● ಫೈರ್-ರಿಟಾರ್ಡಂಟ್‌ ಪ್ಲೈವುಡ್‌ ಬೆಂಕಿ ಹೊತ್ತಿಕೊಳ್ಳುವಿಕೆಯಿಂದ ಬರುವ ಹೊರಸೂಸುವಿಕೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಆಮೂಲಕ ಉಸಿರುಗಟ್ಟದಂತೆ ನಿಮ್ಮನ್ನು ರಕ್ಷಿಸುತ್ತದೆ.

● ಬೆಂಕಿಯ ಮೂಲವು ನಿರ್ಮೂಲನೆ ಮಾಡಲ್ಪಟ್ಟ ನಂತರ, ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಬೆಸೆಯಲ್ಪಟ್ಟಿರುವ ಪ್ಲೈವುಡ್ ಸ್ವಯಂ-ಶಮನಗೊಳ್ಳುತ್ತದೆ. ನಿದರ್ಶನಕ್ಕಾಗಿ, ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಪ್ಲೈವುಡ್, ಉರಿಯುತ್ತಿರುವ ಮೇಣದಬತ್ತಿ ಅಥವಾ ಕರ್ಟನ್‌ನಂಥ ಬೆಂಕಿಯ ಮೂಲವು ತೆಗೆದುಹಾಕಲ್ಪಟ್ಟ ನಂತರ ಸ್ವಯಂ-ಶಮನಗೊಳ್ಳುತ್ತದೆ. ಹಾಗಾಗಿ, ಬೆಂಕಿ ಸಂಬಂಧಿತ ಅವಘಡವೊಂದರಲ್ಲಿ, ಬೆಂಕಿಯನ್ನು ನಂದಿಸುವತ್ತ ನೀವು ಮೊದಲು ಗಮನ ಹರಿಸಬೇಕು ನಂತರ ಆ ಸ್ಥಳವನ್ನು ಖಾಲಿ ಮಾಡಬೇಕು.

● ಈ ಪ್ಲೈವುಡ್‌ನ ಬೆಂಕಿ-ನಿರೋಧಕ ಸಾಮರ್ಥ್ಯವು ಹೆಚ್ಚುವರಿ ಬೆಲೆಯನ್ನು ತೆರದೇ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.

ತೀರ್ಮಾನ​​​​​​​

ನಿರಂತರ ನಾವೀನ್ಯತೆಯ ಮೂಲಕ ಸಾಧ್ಯವಿರುವಷ್ಟು ಅತ್ಯುತ್ತಮ ಉತ್ಪನ್ನಗಳನ್ನು ತನ್ನ ಗ್ರಾಹಕರಿಗೆ ಒದಗಿಸುವ ಉದ್ದೇಶವನ್ನು ಹೊಂದಿರುವ ಸೆಂಚುರಿಪ್ಲೈ, ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಈ ಶತಮಾನದ ಪ್ಲೈವುಡ್ ಅನ್ನು ಈಗ ಪ್ರಸ್ತಾಪಿಸುತ್ತದೆ. ಅನುದ್ದೇಶಿತ ಅಗ್ನಿ ಅನಾಹುತಗಳ ವಿರುದ್ಧ ಹೆಚ್ಚುವರಿ ರಕ್ಷಾಕವಚವನ್ನು ಒದಗಿಸುವ ಅತ್ಯಂತ ಸುಲಭದ ಮಾರ್ಗವು ಹೀಗೆ ಅಡುಗೆಮನೆಯಲ್ಲಿ ಫೈರ್‌ ರಿಟಾರ್ಡಂಟ್ ಪ್ಲೈವುಡ್‌ ಅನ್ನು ಬಳಸುವುದಾಗಿದೆ.

Leave a Comment

Loading categories...

Latest Blogs