ವಿಷಯ ಕೋಷ್ಟಕ:
1.1 ಪರಿಚಯ
1.3 ಸೆಂಚುರಿಪ್ರಾಮಿಸ್
1.4 ಕ್ಷಿಪ್ರ ಸಲಹೆ!
1.1 ಪರಿಚಯ
ಮಾರುಕಟ್ಟೆಯು ಇಂದು ನಕಲಿ ಪ್ಲೈವುಡ್‌ಗಳಿಂದ ತುಂಬಿದೆ. ನಕಲಿ ಲೊಗೊ ಮುದ್ರೆಗಳಿಂದ ಹಿಡಿದು ಬಣ್ಣದ ದ್ರಾವಣಗಳಲ್ಲಿ ಅದ್ದಿರುವ ಪ್ಲೈವುಡ್‌ವರೆಗೆ, ಗ್ರಾಹಕರ ಮನವೊಲಿಸುವ ತಮ್ಮ ಮಾರ್ಗಗಳೊಂದಿಗೆ ಹೆಚ್ಚು ಹೆಚ್ಚು ಚಾತುರ್ಯವನ್ನು ನಕಲಿ ಮಾರಾಟಗಾರರು ಹೊಂದಿದ್ದಾರೆ.
ಸರಿಯಾದ ಖರೀದಿಯನ್ನು ಮಾಡಲು ಹೀಗೆ, ಕೂಲಂಕುಷವಾದ ಗುಣಮಟ್ಟ ಪರೀಕ್ಷೆಯೊಂದನ್ನು ನಡೆಸುವುದು ಅತ್ಯಾವಶ್ಯವಾಗುತ್ತದೆ. ಸರಿಯಾದ ಖರೀದಿಯನ್ನು ಮಾಡಲು ನೀವು ಮಾಡಬಹುದಾದ ಕೆಲವು ಗುಣಮಟ್ಟ ಪರೀಕ್ಷೆಗಳ ಕಡೆಗೆ ನೋಡೋಣ.
1.2 ಗುಣಮಟ್ಟ ಪರೀಕ್ಷೆಗಳು
ಪ್ಲೈವುಡ್ ಒಂದನ್ನು ಕೊಳ್ಳುವ ಮೊದಲು ಕನಿಷ್ಟ ಪಕ್ಷ ಭೌತಿಕ ತಪಾಸಣೆಯೊಂದನ್ನಾದರೂ ನಡೆಸುವುದು ನೀವು ಮಾಡಬಹುದಾದ ಕೆಲಸವಾಗಿರುತ್ತದೆ. ನೀವು ಏನನ್ನು ಪರೀಕ್ಷಿಸಬೇಕು ಎಂದು ನೀವು ಅಚ್ಚರಿಪಡುತ್ತಿದ್ದೀರಾ? ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ:
● ಅಂತರಗಳು ಮತ್ತು ಬಿರುಕುಗಳು
● ಸಮಾನತೆ
● ನಮ್ಯತೆ ಮತ್ತು ಬಾಗುವಿಕೆಯನ್ನು ಪರಿಶೀಲಿಸಿ
ಆದರೆ ಪ್ಲೈವುಡ್ ಎಂಬುದು ಬಲ್ಕ್ ಆಗಿ ಕೊಳ್ಳುವ ಸರಕಾಗಿದ್ದು, ನೀವು ಓರ್ವ ಡೀಲರ್/ಕಾಂಟ್ರ್ಯಾಕ್ಟರ್ ಆಗಿರಿ ಅಥವಾ ನಿಮ್ಮ ಮನೆಯನ್ನು ನಿರ್ಮಿಸುತ್ತಿರುವವರೇ ಆಗಿರಿ, ಪ್ರತಿಯೊಂದು ಪ್ಲೈವುಡ್ ಅನ್ನು ಪರೀಕ್ಷಿಸುವ ಕಷ್ಟಕರ ಪ್ರಕ್ರಿಯೆಯನ್ನು ಅನುಸರಿಸಲು ನೀವು ಬಯಸುವುದಿಲ್ಲ.
1.3 ಸೆಂಚುರಿಪ್ರಾಮಿಸ್
ಹಾಗಾದರೆ ಏನು ಮಾಡಬಹುದು?
ನಾವೀನ್ಯತೆಗಳ ಮುಖಾಂತರ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಒಂದು ಕಂಪನಿಯಾಗಿ, ನಿಮ್ಮ ಗುಣಮಟ್ಟ ಪರಿಶೀಲನಾ ಅವಧಿಯನ್ನು ಗಂಟೆಗಳಿಂದ ಸೆಕೆಂಡುಗಳಿಗೆ ತಗ್ಗಿಸುವ ಒಂದು ವಿಶಿಷ್ಟವಾದ ಪರಿಹಾರೋಪಾಯವಾದ ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ನಾವು ತಂದಿದ್ದೇವೆ.
ನಿಮ್ಮ ಪ್ಲೈವುಡ್ ಕೊಳ್ಳುವಿಕೆಯನ್ನು ಕೇವಲ ಒಂದೇ ಒಂದು ಹಂತದಲ್ಲಿ ಉತ್ತಮಗೊಳಿಸಲೆಂದೇ ಈ ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
ಆ್ಯಪ್ಗಳನ್ನು ಬಳಸುವುದು ತುಂಬಾ ಸಂಕೀರ್ಣವಾದ ಕೆಲಸ!
ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ನಾವು ಪರಿಚಯಿಸಿದಾಗ, “ಆ್ಯಪ್‌ಗಳನ್ನು ಬಳಸುವುದು ತುಂಬಾ ಸಂಕೀರ್ಣವಾಗಿರುತ್ತದೆಯಲ್ಲವೇ?” ಈ ಪ್ರಶ್ನೆಯು ನಮಗೆ ಎದುರಾಗುತ್ತದೆ ಎಂಬುದು ನಮಗೆ ತಿಳಿದೇ ಇತ್ತು, ಮತ್ತು ಹೀಗೆ ಸಾಧ್ಯವಿರುವ ಅತ್ಯಂತ ಸರಳವಾದ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವಂತೆ ನಾವು ನೋಡಿಕೊಂಡೆವು. ಹಾಗೆ ಮಾಡಲು, ಕೇವಲ ಎರಡು ಉದ್ದೇಶಗಳಿಗೆ ಈ ಅಪ್ಲಿಕೇಶನ್ ಅನ್ನು ನಾವು ಸಮರ್ಪಿಸಿದೆವು,
a) ಪ್ಲೈವುಡ್ ಖರೀದಿಯನ್ನು ಪರಿಶೀಲಿಸುವುದು
b) ಇ-ವಾರಂಟಿ ಸರ್ಟಿಫಿಕೇಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು
ಈ ಅಪ್ಲಿಕೇಶನ್ ಅನ್ನು ಬಳಸುವಾಗ ಯಾವುದೇ ತೊಂದರೆಯನ್ನು ನೀವು ಎದುರಿಸದಂತೆ ಒಂದು ತುಂಬಾ ಸರಳವಾದ ಯೂಜರ್ ಇಂಟರ್‌ಫೇಸ್ ಅನ್ನೂ ಸಹ ನಾವು ವಿನ್ಯಾಸಗೊಳಿಸಿದ್ದೇವೆ. ಈ ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ಬಳಸುವ ಹಂತ ಹಂತದ ಪ್ರಕ್ರಿಯೆಯನ್ನು ನಿಮಗೆ ನಾವು ವಿವರಿಸುತ್ತೇವೆ.
ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ಬಳಸುವ ಹಂತ ಹಂತದ ಪ್ರಕ್ರಿಯೆ
ಈ ಸೆಂಚುರಿಪ್ರಾಮಿಸ್ ಆ್ಯಪ್ ಬಳಸಲು ತುಂಬಾ ಸರಳವಾಗಿದ್ದು, ನಿಮ್ಮ ಪ್ಲೈವುಡ್ ಅನ್ನು ಸೆಕೆಂಡುಗಳಲ್ಲಿಯೇ ರೆಕ್ಟಿಫೈ ಮಾಡಲು ಈ ಕೆಳಗೆ ಪಟ್ಟಿ ಮಾಡಿರುವ 5 ಹಂತಗಳು ನಿಮಗೆ ನೆರವಾಗುತ್ತವೆ:
1) ನಿಮ್ಮ ಆ್ಯಪ್ ಸ್ಟೋರ್‌ನಿಂದ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, iOS ಮತ್ತು ಆ್ಯಂಡ್ರಾಯ್ಡ್ ಎರಡಕ್ಕೂ ಈ ಅಪ್ಲಿಕೇಶನ್ ಲಭ್ಯವಿದೆ.
2) ಆರ್ಕಿಟೆಕ್ಟ್, ಕಾಂಟ್ರ್ಯಾಕ್ಟರ್, ಕಸ್ಟಮರ್ ಮುಂತಾದ, ನೀವು ಯಾವ ಕೆಟಗರಿಯಲ್ಲಿ ಬರುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮನ್ನು ನೋಂದಾಯಿಸಿಕೊಳ್ಳಿ.
3) ಆ್ಯಪ್ ಅನ್ನು ಪ್ರವೇಶಿಸಿದ ನಂತರ, ಸ್ಕ್ಯಾನರ್ ಬಟನ್‌ಗಾಗಿ ನೋಡಿ, ಅದರ ಮೇಲೆ ಕ್ಲಿಕ್ ಮಾಡಿ.
4) ಸ್ಕ್ಯಾನರ್ ತೆರೆದುಕೊಳ್ಳುತ್ತದೆ, ನಿಮ್ಮ ಪ್ಲೈವುಡ್ ಮೇಲೆ ಇಂಪ್ರಿಂಟ್ ಆಗಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಇದು ನೇರವಾಗಿ ರಿಜಲ್ಟ್ ವಿಂಡೋಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
5) ಉತ್ಪನ್ನವು ನಕಲಿ ಆಗಿದ್ದಲ್ಲಿ, “ಒರಿಜಿನಲ್ ಸೆಂಚುರಿಪ್ಲೈ ಉತ್ಪನ್ನ ಅಲ್ಲ” ಎಂದು, ಇಲ್ಲದಿದ್ದಲ್ಲಿ “ಒರಿಜಿನಲ್ ಸೆಂಚುರಿಪ್ಲೈ ಉತ್ಪನ್ನ” ಎಂಬ ಸಂದೇಶವೊಂದನ್ನು ಆ್ಯಪ್ ಪ್ರದರ್ಶಿಸುತ್ತದೆ.
ರೆಕ್ಟಿಫೈ ಮಾಡಲು ಸ್ಕ್ಯಾನರ್ ವಿಫಲವಾದಲ್ಲಿ, ಕ್ಯೂಆರ್ ಕೋಡ್ ಸಂಖ್ಯೆಗಳನ್ನು ಮ್ಯಾನ್ಯುವಲ್ ಆಗಿಯೂ ಸಹ ನೀವು ನಮೂದಿಸಬಹುದು.
1.4 ಕ್ಷಿಪ್ರ ಸಲಹೆ!
ಧೃಢೀಕರಣವು ಯಶಸ್ವಿಯಾದ ನಂತರ, ಅದರ ಇ-ವಾರಂಟಿ ಸರ್ಟಿಫಿಕೇಟ್ ಅನ್ನೂ ಸಹ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಭವಿಷ್ಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ನಿಮಗೆ ಹೆಚ್ಚು ಉತ್ತಮವಾಗಿ ಸೇವೆ ಸಲ್ಲಿಸಲು ನಮ್ಮ ಗ್ರಾಹಕ ಸಹಾಯವಾಣಿಗೆ ಇದು ನೆರವಾಗುತ್ತದೆ.
ಈ ಆ್ಯಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ನೀವು ಭೇಟಿ ನೀಡಬಹುದು: https://www.centuryply.com/centurypromise-kannada
ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಲು, ಈ ಸಂಖ್ಯೆಯಲ್ಲಿ ನಮಗೆ ನೀವು ಕರೆ ಮಾಡಬಹುದು: 1800-5722-122 (ಶುಲ್ಕ ರಹಿತ)
Loading categories...