Consumer
ನಿಮ್ಮ ಸುಂದರವಾದ ಮನೆಗೆ ನೈಜವಾದ ಪ್ಲೈವುಡ್

ವಿಷಯ ಕೋಷ್ಟಕ

➔ ಪರಿಚಯ

➔ ಸೆಂಚುರಿಪ್ಲೈ ಪ್ಲೈವುಡ್‌ ಅಪ್ಲಿಕೇಶನ್‌ಗಳ ಸರಣಿಯೊಂದಿಗೆ ನಿಮ್ಮ ಮನೆಯನ್ನು ಸುಂದರವಾಗಿಸಿ

➔ ಸೆಂಚುರಿಪ್ಲೈ ಪ್ಲೈವುಡ್‌ ಅನ್ನು ವಿಶಿಷ್ಟವಾಗಿಸುವ ಅಂಶ ಯಾವುದು?

     ◆ ಸಮಾನ ಕಣ ಸ್ಥಿರತೆ

     ◆ ಅಸಾಧಾರಣ ಪ್ಲೈ ಸ್ಟ್ರೆಂಗ್ತ್

     ◆ GLP ಉಪಚಾರ

     ◆ ಗೆದ್ದಲು ಮತ್ತು ಕೊರಕ ನಿರೋಧಕತೆ

     ◆ E1 ಎಮಿಶನ್‌ ಮಾನಕ ಅನುಸರಣೆ

     ◆ ಜಲ-ನಿರೋಧಕತೆ

     ◆ ನಕಲು-ನಿರೋಧಕತೆ

➔ ಸೆಂಚುರಿ‌ ಪ್ರಾಮಿಸ್: ಭರವಸೆಯ ಒಂದು ಉಪಕ್ರಮ


ಸೆಂಚುರಿಪ್ಲೈನಲ್ಲಿ ಲಕ್ಷಾಂತರ ಗ್ರಾಹಕರು ತಮ್ಮ ನಂಬಿಕೆಯನ್ನಿರಿಸಿದ್ದಾರೆ, ಮತ್ತು ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಅವರ ನಿರೀಕ್ಷೆಗಳನ್ನು ಹುಸಿಯಾಗದಿರಿಸುವ ಪ್ರತಿಯೊಂದು ಪ್ರಯತ್ನವನ್ನೂ ನಾವು ಮಾಡುತ್ತೇವೆ. ಅತ್ಯಂತ ಸಮೃದ್ಧ ಗುಣಲಕ್ಷಣ ಹಾಗೂ ಸುಂದರವಾದ ಕಾಣ್ಕೆಯ ಭರವಸೆಯನ್ನು ನೀಡಲು ಪ್ಲೈವುಡ್‌ ವಿನೀರ್‌ನ ಪ್ರತಿಯೊಂದು ತುಂಡನ್ನೂ ನಮ್ಮ ತಜ್ಞರು ಜಾಗರೂಕತೆಯಿಂದ ಪರೀಕ್ಷಿಸುತ್ತಾರೆ.


ಆದಾಗ್ಯೂ, ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ತಮ್ಮ ಮಾರ್ಗವನ್ನು ಕಂಡುಕೊಂಡಿವೆ. ಜಾಗರೂಕತೆಯಿಂದ ಸಂಗ್ರಹಿಸಿದ ನೈಜವಾದ ಸೆಂಚುರಿಪ್ಲೈ ಪ್ಲೈವುಡ್‌ ಅನ್ನೇ ತಾವು ಖರೀದಿಸುವುದು ಗ್ರಾಹಕರಿಗೆ ತಿಳಿದುಬರುವುದಾದರೂ ಹೇಗೆ? ಕಂಪನಿಗಳು ಕುಶಲತಂತ್ರದಿಂದ ಜನರನ್ನು ವಂಚಿಸತೊಡಗಿದ್ದರಿಂದ ನಕಲಿ ಪ್ಲೈವುಡ್‌ಗಳ ಹಾವಳಿಯ ಈ ಸಮಸ್ಯೆಯು ಒಂದು ಪ್ರಮುಖ ಕಳಕಳಿಯಾಗಿ ಹೊರಹೊಮ್ಮಿತು. ನಕಲಿ ಮಾರಾಟಗಾರರ ಸಮಸ್ಯೆಯನ್ನು ಎದುರಿಸಲು, ಸೆಂಚುರಿಪ್ಲೈ ಉತ್ಪನ್ನಗಳ ನೈಜತೆಯನ್ನು ಕೆಲವೇ ಕ್ಷಣಗಳಲ್ಲಿ ಖಚಿತಪಡಿಸಿಕೊಳ್ಳಲು ನಿಮಗೆ ನೆರವಾಗುವಂತೆ ಸೆಂಚುರಿಪ್ರಾಮಿಸ್‌ ಆ್ಯಪ್‌ ಅನ್ನು ನಾವು ಲಾಂಚ್‌ ಮಾಡಿದೆವು. ಉತ್ಪನ್ನದ ನೈಜತೆಯನ್ನು ಸ್ಕ್ಯಾನ್‌ ಮಾಡಬಹುದಾದ ವಿಶಿಷ್ಟವಾದ ಕೋಡ್‌ನೊಂದಿಗೆ ಪ್ರತಿಯೊಂದು ಉತ್ಪನ್ನವನ್ನು ಈಗ ನಾವು ಉತ್ಪಾದಿಸುತ್ತೇವೆ.

ಸೆಂಚುರಿಪ್ಲೈ ಪ್ಲೈವುಡ್‌ ಅಪ್ಲಿಕೇಶನ್‌ಗಳ ಸರಣಿಯೊಂದಿಗೆ ನಿಮ್ಮ ಮನೆಯನ್ನು ಸುಂದರವಾಗಿಸಿ

ಭಾರತೀಯ ಮಾನಕಗಳಿಂದ ನಿಗದಿಪಡಿಸಿರುವ ಎಲ್ಲ ಅಗತ್ಯ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳಿಗೆ ಅಂಟಿಕೊಂಡಿರುತ್ತಾ, ಬಾಳಿಕೆ ಮತ್ತು ಅಂದಗೊಳಿಸುವಿಕೆಯ ನಿಮ್ಮ ಎಲ್ಲ ಅಗತ್ಯತೆಗಳನ್ನು ಸೆಂಚುರಿಪ್ಲೈ ಈಡೇರಿಸುತ್ತದೆ. ಅತ್ಯುತ್ತಮ ಗುಣಮಟ್ಟವನ್ನು ನಿಮಗೆ ಒದಗಿಸಲು ನಮ್ಮ ಉತ್ಪನ್ನಗಳಿಗೆ ಅನುಮೋದಿತ ಸಾಮಗ್ರಿಗಳನ್ನು ನಾವು ಬಳಸುತ್ತೇವೆ. ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಮ್ಮ ಕಚ್ಛಾ ಸಾಮಗ್ರಿಗಳು ಹಾಗೂ ಸರಕುಗಳ ಮೇಲೆ ಹಲವಾರು ಪರೀಕ್ಷೆಗಳು ಹಾಗೂ ಉಪಚಾರಗಳನ್ನು ನಾವು ನಡೆಸುತ್ತೇವೆ. ನಮ್ಮ ನೈಜವಾದ, ಬಾಳಿಕೆ ಬರುವ ಪ್ಲೈವುಡ್‌ ಅನ್ನು ಈ ಮುಂದಿನ ಉದ್ದೇಶಗಳಿಗೆ ನೀವು ಬಳಸಬಹುದು:

● ಪಾರ್ಟಿಶನ್‌ಗಳು

● ಶೀದಿಂಗ್

● ಅಲಂಕಾರಿಕ ಉದ್ದೇಶಗಳು

● ಕ್ಲ್ಯಾಡಿಂಗ್‌ ಮತ್ತು ಡೋರ್‌ಗಳಂಥ ಹೊರಾಂಗಣಗಳು

● ಕ್ಯಾಬಿನೆಟ್‌ಗಳು, ಶೆಲ್ಫ್‌ಗಳು ಮತ್ತು ಫರ್ನಿಚರ್‌ಗಳಂಥ ಒಳಾಂಗಣಗಳು

ಸೆಂಚುರಿಪ್ಲೈ ಪ್ಲೈವುಡ್‌ ಅನ್ನು ವಿಶಿಷ್ಟವಾಗಿಸುವ ಅಂಶ ಯಾವುದು?

ಸೆಂಚುರಿಪ್ಲೈ ಪ್ಲೈವುಡ್‌ ಕೆಲವು ಅತ್ಯಂತ ಪ್ರಮುಖವಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ, ಅವುಗಳೆಂದರೆ​​​​​​​

ಸಮಾನ ಕಣ ಸ್ಥಿರತೆ

ದಿಶಾತ್ಮಕ ಬಲವನ್ನು ವರ್ಧಿಸಿ, ಪರಿಪೂರ್ಣ ರಚನೆಯನ್ನು ನೀಡುವ, ಸಮಾನ ಕಣ ಸ್ಥಿರತೆಯ ಪ್ಲೈವುಡ್‌ ಅನ್ನು ಸೃಷ್ಟಿಸುವಾಗ ಪ್ರತಿಯೊಂದು ವಿವರಕ್ಕೂ ಅತ್ಯಂತ ಹೆಚ್ಚು ಗಮನವನ್ನು ನಮ್ಮ ತಂಡವು ನೀಡುತ್ತದೆ.​​​​​​​

ಅಸಾಧಾರಣ ಪ್ಲೈ ಸ್ಟ್ರೆಂಗ್ತ್

SSR ದಿಂದ ಸೆಂಚುರಿಪ್ಲೈ ಪ್ಲೈವುಡ್ ಬಲವರ್ಧಿತಗೊಳಿಸಲ್ಪಟ್ಟಿರುವುದರಿಂದ ಶ್ರೇಷ್ಠವಾದ ಸ್ಥಿತಿಸ್ಥಾಪಕ ಗುಣವನ್ನು ಹಾಗೂ ದೀರ್ಘಾಯುಷ್ಯವನ್ನು ಅದು ಹೊಂದಿದೆ. ಪ್ರತಿಯೊಂದು ಪ್ಲೈವುಡ್‌ ವಿಶೇಷವಾಗಿ ಅಭಿಯಾಂತ್ರಿಕಗೊಳಿಸಲ್ಪಟ್ಟಿದ್ದು, ಭಾರೀ ತೂಕ ಹಾಗೂ ಅಧಿಕ ಒತ್ತಡವನ್ನು ತಾಳಿಕೊಳ್ಳಲು ಸಮರ್ಥವಾಗಿದೆ. ಬಾಗುವಿಕೆ ಮತ್ತು ಇತರ ವಿರೂಪತೆಗಳಿಗೆ ಅದು ನಿರೋಧಕವಾಗಿದೆ. ಹೀಗೆ, ಪ್ಯಾನೆಲಿಂಗ್‌ ಮತ್ತು ಫರ್ನಿಚರ್‌ಗಳಿಗಾಗಿ ಅದು ಒಂದು ಆದರ್ಶಪ್ರಾಯವಾದ ಆಯ್ಕೆ ಆಗಿದೆ.​​​​​​​

GLP ಉಪಚಾರ

ವಿಶಿಷ್ಟವಾದ ಗ್ಲ್ಯೂ ಲೈನ್‌ ಪ್ರೊಟೆಕ್ಷನ್‌ (GLP) ಅನ್ನು ನಮ್ಮ ಪ್ಲೈವುಡ್‌ ಹೊಂದಿದೆ. ಅದರ ಬಲವನ್ನು ಇನ್ನೂ ಹೆಚ್ಚು ವರ್ಧಿಸುವ, ವಿಶೇಷವಾಗಿ ಸೂತ್ರೀಕರಿಸಿದ ರಕ್ಷಣಾತ್ಮಕ ರಸಾಯನಿಕಗಳನ್ನು ಇದು ಒಳಗೊಂಡಿದ್ದು, ಅದನ್ನು ಕೊರಕ ಮತ್ತು ಗೆದ್ದಲು ನಿರೋಧಕವನ್ನಾಗಿಸುತ್ತದೆ.Anchor

ಗೆದ್ದಲು ಮತ್ತು ಕೊರಕ ನಿರೋಧಕತೆ

ನಿಮ್ಮ ಪೀಠೋಪಕರಣಕ್ಕೆ ದೀರ್ಘ ಬಾಳಿಕೆಯನ್ನು ನೀಡುವ ಕೀಟ-ಮುಕ್ತವಾದ ನೈಜ ಪ್ಲೈವುಡ್‌ ಸಾಮಗ್ರಿಯನ್ನು ಕೊಳ್ಳಿ. GLP ಉಪಚರಿಸುವಿಕೆಯು ಗೆದ್ದಲುಗಳ ದಾಳಿಯನ್ನಷ್ಟೇ ಅಲ್ಲದೇ ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಪ್ಲೈವುಡ್‌ ಅನ್ನು ವೆಚ್ಚ ಸಾರ್ಥಕವಾಗಿಸುತ್ತದೆ.​​​​​​​

E1 ಎಮಿಶನ್‌ ಮಾನಕ ಅನುಸರಣೆ

ಸೆಂಚುರಿಪ್ಲೈ ಫೈರ್‌ವಾಲ್‌ ಉತ್ಪನ್ನಗಳು E1 ಹೊರಸೂಸುವಿಕೆ ಸುರಕ್ಷತಾ ಮಾನಕಗಳನ್ನು ಅನುಸರಣೆ ಮಾಡುತ್ತವೆ. ಸೂಕ್ತವಾದ ಫಾರ್ಮಾಲ್ಡಿಹೈಡ್‌ ಎಮಿಶನ್‌ ಮಾನಕಗಳು ಅಂದರೆ 0.07 ppm ಗೆ ಸಮ ಅಥವಾ ಅದಕ್ಕಿಂತಲೂ ಕಡಿಮೆ ಮಾನಕಗಳನ್ನು ಅವುಗಳು ಕಾಯ್ದುಕೊಳ್ಳುವುದರಿಂದ ಪರಿಸರಾತ್ಮಕವಾಗಿ ಅವುಗಳು ಸುರಕ್ಷಿತವಾಗಿವೆ.​​​​​​​

ಜಲ-ನಿರೋಧಕತೆ

ಪ್ಲೈವುಡ್‌ ಒದ್ದೆಯಾಗಿ ಪೀಠೋಪಕರಣಗಳು ಅಥವಾ ಪಾರ್ಟಿಶನ್‌ಗಳು ವಿರೂಪಗೊಳ್ಳುವ ಸಮಸ್ಯೆ ಇರುವುದಿಲ್ಲ. ನೀರು ಚೆಲ್ಲಾಡಿ, ಪ್ಲೈವುಡ್‌ ಉಬ್ಬಿ, ತನ್ನ ಆಕಾರವನ್ನು ಕಳೆದುಕೊಂಡು, ಕಟ್ಟಿಗೆಯ ಪದರಗಳು ಬೇರೆ ಬೇರೆ ಆಗುವಿಕೆಯ ಬಗ್ಗೆ ಸೆಂಚುರಿಪ್ಲೈನಲ್ಲಿ ನೀವು ಚಿಂತಿಸಬೇಕಿರುವುದಿಲ್ಲ. ನಮ್ಮ ಪ್ಲೈವುಡ್‌ ಜಲ-ನಿರೋಧಕವಾಗಿದ್ದು, ತೇವಾಂಶದ ಪರಿಣಾಮಗಳು ಮತ್ತು ನೀರು ಚೆಲ್ಲಾಡುವಿಕೆಯಿಂದ ಪ್ರಭಾವಿತಗೊಳ್ಳುವುದಿಲ್ಲ.​​​​​​​

ನಕಲು-ನಿರೋಧಕತೆ

ಸೆಂಚುರಿಪ್ರಾಮಿಸ್‌ ಆ್ಯಪ್‌ನೊಂದಿಗೆ, ಪ್ಲೈವುಡ್‌ ಅನ್ನು ಕೊಳ್ಳುವ ಮೊದಲು ಅದರ ನೈಜತೆಯನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಉತ್ಪನ್ನವು ನೈಜವಾದುದ್ದೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಸೆಂಚುರಿಪ್ರಾಮಿಸ್‌ ಆ್ಯಪ್‌ ಅನ್ನು ಬಳಸಿಕೊಂಡು ಸ್ಕ್ಯಾನ್‌ ಮಾಡಬಹುದಾದ QR ಕೋಡ್‌ ಒಂದನ್ನು ಎಲ್ಲ ಪ್ಲೈವುಡ್‌ಗಳು ಹೊಂದಿರುತ್ತವೆ. ಈ ಅಪ್ಲಿಕೇಶನ್‌ನಲ್ಲಿ ಡೀಲರ್‌ಗಳು ಮತ್ತು ಕಾಂಟ್ರ್ಯಾಕ್ಟರ್‌ಗಳೂ ಸಹ ನೋಂದಾಯಿಸಿಕೊಂಡು, ತಮ್ಮ ಸೆಂಚುರಿಪ್ಲೈ ಪ್ಲೈವುಡ್‌ಗಳ ನೈಜತೆಯ ಬಗ್ಗೆ ಪಾರದರ್ಶಕವಾಗಿ ಇರುವ ಮೂಲಕ ತಮ್ಮ ಗ್ರಾಹಕರ ವಿಶ್ವಾಸವನ್ನು ಗಳಿಸಲು ಅದನ್ನು ಬಳಸಿಕೊಳ್ಳಬಹುದು.​​​​​​​

ಸೆಂಚುರಿ‌ಪ್ರಾಮಿಸ್: ಭರವಸೆಯ ಒಂದು ಉಪಕ್ರಮ​​​​​​​

ಸೆಂಚುರಿಪ್ಲೈ ಪ್ಲೈವುಡ್‌ನ ಅನನ್ಯವಾದ ವೈಶಿಷ್ಟ್ಯತೆಗಳಿಂದಾಗಿ ಅದರ ಹೆಚ್ಚುತ್ತಿರುವ ಬೇಡಿಕೆಯು, ನಕಲಿ ಉತ್ಪನ್ನಗಳನ್ನು ತಯಾರಿಸಲು ಹಲವಾರು ಉತ್ಪಾದಕರನ್ನು ಪ್ರಚೋದಿಸಿದೆ. ತಾವು ಕೊಳ್ಳುತ್ತಿರುವುದು ನೈಜ ಉತ್ಪನ್ನವೇ ಅಲ್ಲವೇ, ಅಸಲಿ ಪ್ಲೈವುಡ್ಅನ್ನು ಗುರುತಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಳಕೆದಾರರಿಗೆ ಸವಾಲಿನ ಕೆಲಸವಾಗಿಬಿಟ್ಟಿದೆ. ಆದ್ದರಿಂದ, ಈ ಸಮಸ್ಯೆಯನ್ನು ಕಾರ್ಯಕ್ಷಮತೆಯಿಂದ ನಿಭಾಯಿಸಲು ಸೆಂಚುರಿಪ್ರಾಮಿಸ್‌ ಆ್ಯಪ್‌ ಅನ್ನು ಸೆಂಚುರಿಪ್ಲೈ ಪರಿಚಯಿಸಿದೆ.

ಬೇರಾವುದೇ ವ್ಯಕ್ತಿಯ ಮೇಲೆ ಅವಲಂಬಿತರಾಗದೇ, ತಮ್ಮ ಅನುಕೂಲತೆಯಲ್ಲಿಯೇ ನೈಜತೆಯನ್ನು ಪರಿಶೀಲಿಸಲು ತಂತ್ರಜ್ಞಾನದ ನೆರವಿನೊಂದಿಗೆ ನಮ್ಮ ಗ್ರಾಹಕರನ್ನು ಸಬಲೀಕರಿಸುವ ಈ ಉಪಕ್ರಮವು ತನ್ನ ವರ್ಗದಲ್ಲಿಯೇ ಪ್ರಥಮವಾದುದ್ದಾಗಿದೆ.

ನಿಮ್ಮ ಪ್ಲೈವುಡ್‌ನ ನೈಜತೆಯನ್ನು ತಿಳಿಸುವುದಲ್ಲದೇ, ಪ್ರತಿಯೊಂದು ಉತ್ಪನ್ನದ ನಿರ್ದಿಷ್ಟತೆಗಳನ್ನೂ ಸಹ ಸೆಂಚುರಿಪ್ರಾಮಿಸ್‌ ಆ್ಯಪ್ ಪಟ್ಟಿ ಮಾಡುತ್ತದೆ. ನೈಜ ಪ್ಲೈವುಡ್‌ ಸರ್ಟಿಫಿಕೇಟ್‌ ಅನ್ನು ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಇ-ವಾರಂಟಿ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ನಿಮ್ಮನ್ನು ಇದು ಅನುಮತಿಸುತ್ತದೆ. ಸೆಂಚುರಿಪ್ಲೈನಲ್ಲಿ ನಡೆಯುತ್ತಿರುವ ಇತ್ತೀಚಿನ ಪ್ರೊಮೋಶನ್‌ಗಳು ಹಾಗೂ ಆಫರ್‌ಗಳ ಬಗ್ಗೆ ಅಪ್ಡೇಟ್‌ಗಳನ್ನೂ ಸಹ ಈ ಆ್ಯಪ್‌ ನಿಮಗೆ ಒದಗಿಸುತ್ತದೆ. ಈ ಆ್ಯಪ್‌ ಅನ್ನು ಬಳಸಿಕೊಂಡು ನಿಮ್ಮ ಅಮೂಲ್ಯವಾದ ಫೀಡ್‌ಬ್ಯಾಕ್‌ ಅನ್ನೂ ಸಹ ನೀವು ಹಂಚಿಕೊಳ್ಳಬಹುದು.

ನೈಜ ಪ್ಲೈವುಡ್‌ ಅನ್ನು ಕೊಂಡು, ನಿಮ್ಮ ಮನೆಯ ಚೆಲುವನ್ನು ಹೆಚ್ಚಿಸಿಕೊಳ್ಳಲು ತಾಂತ್ರಿಕ ನೆರವನ್ನು ಬಳಸಿಕೊಳ್ಳಿ!


Leave a Comment

Loading categories...

Latest Blogs