ಬ್ರ್ಯಾಂಡ್ ಒಂದರಿಂದ ಪ್ಲೈವುಡ್ ಐಟಮ್‌ಗಳನ್ನು ಕೊಳ್ಳುವಾಗ, ಆ ಪ್ಲೈವುಡ್‌ನ ನಿರ್ವಹಣೆಯ ಮೇಲೆ ಬಹಳಷ್ಟು ಹಣವನ್ನು ವ್ಯಯಿಸದೇ ಅದನ್ನು ನೀವು ಬಳಸಬಹುದು ಎಂದು ನೀವು ಭರವಸೆಯನ್ನು ತಳೆಯಲು ಉನ್ನತ-ಗುಣಮಟ್ಟ ಪರಿಶೀಲನೆಯು ಅವಶ್ಯಕವಾಗುತ್ತದೆ. ಆನ್‌ಲೈನ್‌ನಲ್ಲಿ ಅನೇಕ ವಂಚಕರು ಇರುವುದರೊಂದಿಗೆ, ಅನೇಕ ಖೊಟ್ಟಿ ಕಂಪನಿಗಳು ಕಳಪೆ-ಗುಣಮಟ್ಟದ ಕಚ್ಚಾ ಸಾಮಗ್ರಿಗಳಿಂದ ನಕಲಿ ಪ್ಲೈವುಡ್ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ನಕಲಿ ಪ್ಲೈವುಡ್‌ನ ದೊಡ್ಡ-ಪ್ರಮಾಣದ ಉತ್ಪಾದನೆಯಿಂದಾಗಿ ಗುಣಮಟ್ಟ ಪರಿಶೀಲನೆಯು ಪ್ರಾಧಾನ್ಯತೆಯನ್ನು ಪಡೆದಿದೆ. ಸೆಂಚುರಿಪ್ಲೈ ಪ್ಲೈವುಡ್ ಅನ್ನು ಕೊಳ್ಳುವ ಮೊದಲು ಪ್ಲೈವುಡ್‌ನ ಗುಣಮಟ್ಟ ಪರಿಶೀಲನೆಯನ್ನು ನೀವು ಮಾಡಬಹುದು.
ಪ್ಲೈವುಡ್ ಗುಣಮಟ್ಟ ಪರಿಶೀಲನೆಯೊಂದಿಗಿನ ಏಕಮಾತ್ರ ಸಮಸ್ಯೆ ಎಂದರೆ ಅದು ದೀರ್ಘವಾದ ಕಾರ್ಯವಿಧಾನವಾಗಿರುವುದು. ಈ ಸುದೀರ್ಘವಾದ ಕಾರ್ಯವಿಧಾನವು ದೃಶ್ಯಾತ್ಮಕ ಪರಿಶೀಲನೆಗಳು ಹಾಗೂ ಕುದಿಯುವ ನೀರಿನ ಪ್ರಯೋಗಗಳನ್ನು ಒಳಗೊಳ್ಳುತ್ತದೆ. ಹೀಗೆ, ಪ್ಲೈವುಡ್ ಗುಣಮಟ್ಟ ಪರಿಶೀಲನೆಯನ್ನು ಶ್ರಮರಹಿತ ಹಾಗೂ ಅನುಕೂಲಕರವನ್ನಾಗಿಸಲು, ತನ್ನ ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಅನ್ನು ಸೆಂಚುರಿಪ್ಲೈ ಹೊರತಂದಿದೆ.
ತನ್ನ ಸೆಂಚುರಿಪ್ರಾಮಿಸ್ ಮೊಬೈಲ್ ಆ್ಯಪ್ ಮೂಲಕ ತನ್ನ ಪ್ಲೈವುಡ್‌ನ ನೈಜ ಪರಿಶೀಲನೆಯ ಭರವಸೆಯೊಂದನ್ನು ಸೆಂಚುರಿಪ್ಲೈ ನೀಡುತ್ತದೆ. ಸೆಂಚುರಿಪ್ಲೈ ಪ್ಲೈವುಡ್‌ನ ಮಾನ್ಯತೆಯನ್ನು ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ನಿಯಂತ್ರಿಸುತ್ತದೆ.
ವಿಷಯ ಕೋಷ್ಟಕ
➔ ಪ್ಲೈವುಡ್ ಗುಣಮಟ್ಟ ಪರಿಶೀಲನೆ ಎಂದರೇನು?
➔ ಯಾವ ಸೆಂಚುರಿಪ್ಲೈ ಉತ್ಪಾದಿತ ಉತ್ಪನ್ನಗಳು ಕ್ವಿಕ್ ರೆಸ್ಪಾನ್ಸ್ ಕೋಡ್‌ಗಳನ್ನು ಒಳಗೊಂಡಿವೆ?
➔ ಸೆಂಚುರಿಪ್ಲೈ ಅಪ್ಲಿಕೇಶನ್‌ನ ವೈಶಿಷ್ಟ್ಯತೆಗಳು
➔ ಪ್ಲೈವುಡ್ ಗುಣಮಟ್ಟ ಪರಿಶೀಲನೆಯು ಹೇಗೆ ಕೆಲಸ ಮಾಡುತ್ತದೆ?
➔ ತೀರ್ಮಾನ
ಪ್ಲೈವುಡ್ ಗುಣಮಟ್ಟ ಪರಿಶೀಲನೆ ಎಂಬುದು ಬ್ರ್ಯಾಂಡ್ ಒಂದರಿಂದ ಖರೀದಿಸಿದ ಪ್ಲೈವುಡ್‌ನ ಗುಣಮಟ್ಟವನ್ನು ಪರಿಶೀಲಿಸುವ ಒಂದು ಪ್ರಕ್ರಿಯೆಯಾಗಿದೆ. ಪ್ಲೈವುಡ್ ಒಂದರಲ್ಲಿ ಹೂಡಿಕೆಯನ್ನು ನೀವು ಮಾಡಿದಾಗಲೆಲ್ಲ, ನೀವು ಖರೀದಿಸಿದ ಪ್ಲೈವುಡ್‌ನ ಉನ್ನತ-ಗುಣಮಟ್ಟ ಪರಿಶೀಲನೆಯನ್ನು ನೀವು ಮಾಡಬೇಕು. ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಿಂದ ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಪ್ಲೈವುಡ್ ಗುಣಮಟ್ಟ ಪರಿಶೀಲನೆಯನ್ನು ನೀವು ಮಾಡಬಹುದು.
ಸೆಂಚುರಿಪ್ಲೈ ಉತ್ಪಾದಿತ ಉತ್ಪನ್ನಗಳು ಕ್ವಿಕ್ ರೆಸ್ಪಾನ್ಸ್ ಕೋಡ್‌ಗಳನ್ನು ಒಳಗೊಂಡಿದ್ದು, ನಿಮ್ಮ ಅನುಕೂಲತೆಗೆ ಅನುಗುಣವಾಗಿ ಪ್ಲೈವುಡ್ ಗುಣಮಟ್ಟವನ್ನು ಪರಿಶೀಲನೆ ಮಾಡಲು ನಿಮ್ಮನ್ನು ಅನುಮತಿಸುತ್ತವೆ. ಈ ಉತ್ಪನ್ನಗಳು ಹೀಗಿವೆ:
● ಸೈನಿಕ್ ಪ್ಲೈವುಡ್
● ಆರ್ಕಿಟೆಕ್ಟ್ ಪ್ಲೈ
● ಸೈನಿಕ್ MR
● ಕ್ಲಬ್ ಪ್ರೈಮ್
● ವಿನ್ MR
● ಬಾಂಡ್ 710
ಸೆಂಚುರಿಪ್ಲೈ ಅಪ್ಲಿಕೇಶನ್‌ನ ಕೆಲವು ವೈಶಿಷ್ಟ್ಯತೆಗಳು ಹೀಗಿವೆ
● ಈ ಮೊಬೈಲ್ ಅಪ್ಲಿಕೇಶನ್ ಆ್ಯಂಡ್ರಾಯ್ಡ್ ಮತ್ತು iOS ನಲ್ಲಿ ಲಭ್ಯವಿದೆ. ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ನಿಂದ ನೀವದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
● ಪ್ಲೈವುಡ್ ಮೇಲೆ ಮುದ್ರಿಸಲ್ಪಟ್ಟಿರುವ ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ಈ ಅಪ್ಲಿಕೇಶನ್ ಪರೀಕ್ಷಿಸಿ, ಆ ಪ್ಲೈವುಡ್ ನೈಜವಾದುದ್ದೇ ಎಂದು ಪರಿಶೀಲಿಸುತ್ತದೆ.
● ಯಾವುದೇ ಶುಲ್ಕಗಳನ್ನು ಪಾವತಿಸದೇ ಈ ಅಪ್ಲಿಕೇಶನ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
● ನಿಮಗೆ ಬೇಕಾದಾಗಲೆಲ್ಲ ಈ ಅಪ್ಲಿಕೇಶನ್ ಅನ್ನು ನೀವು ಆ್ಯಕ್ಸೆಸ್ ಮಾಡಬಹುದು.
● ಈ ಮೊಬೈಲ್ ಅಪ್ಲಿಕೇಶನ್ ಅನ್ನು ಯಾರು ಬೇಕಾದರೂ ಬಳಸಬಹುದು.
● ಈ ಅಪ್ಲಿಕೇಶನ್ ಮೂಲಕ ಡಿಜಿಟಲ್ ವಾರಂಟಿ ಸರ್ಟಿಫಿಕೇಟ್ ಒಂದನ್ನು ನೀವು ಜನರೇಟ್ ಮಾಡಬಹುದು.
● ಪ್ರಾಡಕ್ಟ್ ಕೋಡ್‌ನ ವಿವರಗಳನ್ನು ನೀವು ನೋಡಬಹುದು.
● ಹೆಸರು ಮತ್ತು ಸಂಪರ್ಕ ವಿವರಗಳಂಥ ನಿಮ್ಮ ಪ್ರಮುಖ ಮಾಹಿತಿಯನ್ನು ಬಳಸಿಕೊಂಡು ಈ ಅಪ್ಲಿಕೇಶನ್‌ನಲ್ಲಿ ನೀವು ನೋಂದಣಿ ಮಾಡಿಕೊಳ್ಳಬಹುದು.
ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಮೂಲಕ ಪ್ಲೈವುಡ್ ಗುಣಮಟ್ಟ ಪರಿಶೀಲನೆಯನ್ನು ನೀವು ನಡೆಸಬಹುದು. ನಿಮ್ಮ ಪೀಠೋಪಕರಣಕ್ಕಾಗಿ ನೀವು ಖರೀದಿಸಿದ ಪ್ಲೈವುಡ್‌ನ ಗುಣಮಟ್ಟವನ್ನು ಪರಿಶೀಲಿಸಲು ಮೂರು ಮೂಲ ಹಂತಗಳ ಮೂಲಕ ನೀವು ಹಾದುಹೋಗಬೇಕು.
ನೀವು ಅನುಸರಿಬೇಕಿರುವ ಮೂರು ಮೂಲ ಹಂತಗಳು ಹೀಗಿವೆ:
ನಿಮ್ಮ ಮೊಬೈಲ್ ಫೋನ್/ಟ್ಯಾಬ್ಲೆಟ್‌ನಲ್ಲಿ ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಇನ್‌ಸ್ಟಾಲ್ ಮಾಡಿ, ಅದನ್ನು ಆ್ಯಕ್ಸೆಸ್ಸಿಬಲ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳುವುದನ್ನು ನೀವು ಮುಗಿಸಿದ ನಂತರ, ಅಪ್ಲಿಕೇಶನ್ ಅನ್ನು ತೆರೆಯಿರಿ. ಅಪ್ಲಿಕೇಶನ್ ಅನ್ನು ನೀವು ತೆರೆದಾಗ, ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ಅಪ್‌ಲೋಡ್ ಮಾಡಿ ಎಂಬ ಆಯ್ಕೆಗಳನ್ನು ನೀವು ನೋಡುತ್ತೀರಿ. ನಿಮಗೆ ಸೂಕ್ತವಾಗುವುದನ್ನು ಆಯ್ಕೆ ಮಾಡಿ. ಮೊದಲನೇಯದ್ದನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ, ನೀವು ಖರೀದಿಸಿದ ಪ್ಲೈವುಡ್‌ನ ಮೇಲೆ ಇರುವ ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ನೀವು ಸ್ಕ್ಯಾನ್ ಮಾಡಬೇಕಿರುತ್ತದೆ. ಎರಡನೇಯದ್ದನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ, ಪ್ಲೈವುಡ್ ಮೇಲೆ ಮುದ್ರಿಸಲ್ಪಟ್ಟಿರುವ ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ನೀವು ನಮೂದಿಸಬೇಕಿರುತ್ತದೆ.
ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ನೀವು ಸ್ಕ್ಯಾನ್ ಮಾಡಿ, ಕೆಲವು ಸೆಕೆಂಡುಗಳು ಕಾಯಬೇಕು. ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸಿ, ನಿಖರವಾದ ಫಲಿತಾಂಶಗಳನ್ನು ನಿಮಗೆ ನೀಡಲು ಸಮಯ ನೀಡಿ.
ಸೆಂಚುರಿಪ್ಲೈ ಪ್ಲೈವುಡ್ ಪರಿಶೀಲಿಸಲ್ಪಟ್ಟು, ನೈಜ ಮೂಲಗಳಿಂದ ಉತ್ಪಾದಿಸಲ್ಪಟ್ಟಿದ್ದಲ್ಲಿ, ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ನೈಜ ಉತ್ಪನ್ನದ ಸಂದೇಶವನ್ನು ಪ್ರದರ್ಶಿಸುತ್ತದೆ. ಉತ್ಪನ್ನವು ನಕಲಿ ಆಗಿದ್ದಲ್ಲಿ, ಅದು ನೈಜ ಉತ್ಪನ್ನವಲ್ಲ ಎಂಬ ಸಂದೇಶವನ್ನು ಅಪ್ಲಿಕೇಶನ್ ಪ್ರದರ್ಶಿಸುತ್ತದೆ. ಉತ್ಪನ್ನದ ವಿವರಗಳಲ್ಲಿ ಆ ಉತ್ಪನ್ನದ ಹೆಸರು, ದಪ್ಪ, ಗಾತ್ರ, ಕೋಡ್ ಮತ್ತು ಮೂಲದ ಹೆಸರು ಇವುಗಳು ಸೇರಿರುತ್ತವೆ. ಈ ಉತ್ಪನ್ನ ವಿವರಗಳ ಕೆಳಗೆ, ಇ-ವಾರಂಟಿ ಸರ್ಟಿಫಿಕೇಟ್ ಒಂದನ್ನು ಜನರೇಟ್ ಮಾಡುವ ಆಯ್ಕೆಯನ್ನು ನೀವು ನೋಡುತ್ತೀರಿ.
ಉತ್ಪನ್ನ ವಿವರಗಳ ನಕಲುಪ್ರತಿಯೊಂದನ್ನು ಇರಿಸಿಕೊಳ್ಳಲು ಇ-ವಾರಂಟಿ ಸರ್ಟಿಫಿಕೇಟ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಸೇವ್ ಮಾಡಿಕೊಳ್ಳಬಹುದು. ಸೆಂಚುರಿಪ್ರಾಮಿಸ್ ಅಪ್ಲಿಕೇಶನ್‌ನೊಂದಿಗಿನ ನಿಮ್ಮ ಅನುಭವವನ್ನು ಆ ಅಪ್ಲಿಕೇಶನ್‌ನಲ್ಲಿಯೇ ನೀವು ಹಂಚಿಕೊಳ್ಳಬಹುದು. ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಅನ್ನು ಬಳಸುವಲ್ಲಿ ಯಾವುದೇ ಸಮಸ್ಯೆಯನ್ನು ನೀವು ಎದುರಿಸಿದಲ್ಲಿ, ಮೊಬೈಲ್ ಅಪ್ಲಿಕೇಶನ್‌ನ ಫೀಡ್‌ಬ್ಯಾಕ್ ಕೆಟಗರಿಯಲ್ಲಿ ಪ್ರಾಮಾಣಿಕ ವಿಮರ್ಶೆಯೊಂದನ್ನು ನೀವು ನೀಡಬಹುದು. ಫೀಡ್‌ಬ್ಯಾಕ್ ಮತ್ತು ವಿಮರ್ಶೆಗಳನ್ನು ಸ್ವೀಕರಿಸಿದ ನಂತರ, ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ತಂಡವು ಅದಕ್ಕನುಸಾರವಾಗಿ ಕೆಲಸ ಮಾಡಿ, ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಅನ್ನು ನೀವು ಬಳಸಿದಲ್ಲಿ, ಪ್ಲೈವುಡ್ ಹುನ್ನಾರದ ಸಮಸ್ಯೆಯನ್ನು ಹಿಮ್ಮೆಟ್ಟಿಸಿ, ನಿಮ್ಮ ಗೃಹೋಪಯೋಗಿ ಅಗತ್ಯತೆಗಳಿಗಾಗಿ ನೈಜ ಸರಕುಗಳನ್ನು ನೀವು ಕೊಳ್ಳಬಹುದು. ನೀವು ಖರೀದಿಸಿರುವ ಸೆಂಚುರಿಪ್ಲೈ ಪ್ಲೈವುಡ್ ನಕಲಿ ಆಗಿದೆ ಎಂದು ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಪ್ರದರ್ಶಿಸಿದಲ್ಲಿ, ಮಾರಾಟಗಾರರನ್ನು ಸಂಪರ್ಕಿಸಿ, ಆ ಸಮಸ್ಯೆಯ ಬಗ್ಗೆ ನೀವು ತಿಳಿಸಬಹುದು. ನೀವು ಕೊಳ್ಳುವ ಪ್ರತಿಯೊಂದು ಪ್ಲೈವುಡ್‌ಗೂ ಗುಣಮಟ್ಟ ಪರಿಶೀಲನೆಯನ್ನು ನೀವು ನಡೆಸುವುದು ಪ್ರಮುಖವಾಗಿರುತ್ತದೆ.
ಮಿಥ್ಯಾ ಸೃಷ್ಟಿಯ ಸರಕನ್ನು ಕೊಳ್ಳುವುದರಿಂದ ಹಣವು ವ್ಯರ್ಥವಾಗುತ್ತದೆ ಹಾಗೂ ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನಕಲಿ ಉತ್ಪನ್ನವು ಬೆಂಕಿ-ನಿರೋಧಕ, ಜಲ-ನಿರೋಧಕ ಅಥವಾ ಗೆದ್ದಲು-ನಿರೋಧಕವಾಗಿಲ್ಲದಿರಬಹುದು ಹಾಗೂ ಭಾರೀ ಭಾರಗಳಿಗೆ ಸ್ಥಿರತೆಯನ್ನು ಪ್ರದರ್ಶಿಸದಿರಬಹುದು. ಹೀಗೆ, ಸೆಂಚುರಿಪ್ರಾಮಿಸ್ ಅಪ್ಲಿಕೇಶನ್ ಮೂಲಕ ಗುಣಮಟ್ಟ ಪರಿಶೀಲನೆಯನ್ನು ನೀವು ನಡೆಸಬೇಕು.
ಸೆಂಚುರಿಪ್ರಾಮಿಸ್ ಅಪ್ಲಿಕೇಶನ್, ನಕಲಿ ಪ್ಲೈವುಡ್ ವಿರುದ್ಧ ಜಾಗೃತಿಯನ್ನು ಮೂಡಿಸುವ ಸೆಂಚುರಿಪ್ಲೈನ ಆಂದೋಲನವಾಗಿರುವುದರಿಂದ, ನಿಖರವಾದ ಫಲಿತಾಂಶಗಳನ್ನು ಈ ಅಪ್ಲಿಕೇಶನ್ ಒದಗಿಸುತ್ತದೆ. ಸೆಂಚುರಿಪ್ಲೈ ಎಂಬುದು ವರ್ಷಗಳಾದ್ಯಂತ ಅನೇಕ ಜನರ ವಿಶ್ವಾಸವನ್ನು ಗಳಿಸಿರುವ ಒಂದು ಬ್ರ್ಯಾಂಡ್ ಆಗಿದೆ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಇನ್‌ಸ್ಟಾಲ್ ಮಾಡಿಕೊಳ್ಳಲು ಹೆಚ್ಚುವರಿ ಶುಲ್ಕಗಳನ್ನು ನೀವು ಪಾವತಿಸಬೇಕಿಲ್ಲದಿರುವುದರಿಂದ ನೀವು ಚಿಂತಿಸಬೇಕಿರುವುದಿಲ್ಲ.
Loading categories...