ಓರ್ವ ವ್ಯಕ್ತಿಯು ಸಮೀಪದ ಅಂಗಡಿಯೊಂದರಿಂದ ಸೆಂಚುರಿಪ್ಲೈ ಅನ್ನು ಕೊಂಡು ತಂದಿದ್ದಲ್ಲಿ, ಅದರ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅದರ ಅಸಲಿತನವನ್ನು ಸುಲಭವಾಗಿ ಅವರು ನಿರ್ಣಯಿಸಬಹುದು. ನೀವು ಅಸಲಿ ಪ್ಲೈವುಡ್ ಒಂದನ್ನು ಕೊಂಡು ತಂದಿದ್ದೀರೋ ಅಥವಾ ನಕಲಿಯನ್ನೋ ಎಂಬ ವಿಚಾರವು ನಿಮಗೆ ತಿಳಿದುಬರುವಂತೆ ಆ ಪ್ಲೈವುಡ್‌ನ ಎಲ್ಲ ವಿವರಗಳನ್ನು ಈ
ಆ್ಯಪ್ ತಕ್ಷಣ ನಿಮಗೆ ನೀಡುತ್ತದೆ.
ಸ್ಕ್ಯಾನಿಂಗ್ ಸರಿಯಾಗಿ ಬಾರದಿದ್ದಲ್ಲಿ, ಆ ಕ್ಯೂಆರ್ ಕೋಡ್ ಅನ್ನು ಇರಿಸುವ ಮ್ಯಾನುವಲ್ ಆಯ್ಕೆಯನ್ನೂ ಸಹ ಸೆಂಚುರಿಪ್ರಾಮಿಸ್ ಆ್ಯಪ್ ಹೊಂದಿದೆ. ನೈಜ ಸೆಂಚುರಿಪ್ಲೈ ಅನ್ನು ನೀವು ಕೊಂಡಿದ್ದಲ್ಲಿ, ಎಲ್ಲ ಮಾಹಿತಿಯನ್ನು ನಿಮಗೆ ಒದಗಿಸಲಾಗುತ್ತದೆ.
ಸೆಂಚುರಿಪ್ರಾಮಿಸ್ ಆ್ಯಪ್ ಅನ್ನು ಆ್ಯಕ್ಸೆಸ್ ಮಾಡುವುದು ತುಂಬಾ ಸುಲಭವಾಗಿದೆ. ಈ ಆ್ಯಪ್ ಅನ್ನು ಬಳಸುವ ಹಂತಗಳನ್ನು ಈ ಕೆಳಗೆ ನೀಡಲಾಗಿದೆ –
● ಪ್ಲೇ ಸ್ಟೋರ್‌ನಿಂದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ
● ಆ್ಯಪ್‌ನ ಪ್ರಯೋಜನಗಳನ್ನು ನೀವು ಪ್ರವೇಶಿಸಲು ಅನುವಾಗುವಂತೆ ಅದರಲ್ಲಿ ನಿಮ್ಮ ಎಲ್ಲ ವಿವರಗಳನ್ನು ನೋಂದಾಯಿಸಿ
● ನೋಂದಾಯಿಸುವ ಮೂಲಕ, ಆ್ಯಪ್‌ನೊಳಗೆ ಅಂತಿಮವಾಗಿ ನೀವು ಲಾಗ್ ಇನ್ ಆಗಬಹುದು
● ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ – 1. ಪ್ಲೈ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಥವಾ 2. ಎಲ್ಲ ವಿವರಗಳನ್ನು ಪಡೆಯಲು ಕ್ಯೂಆರ್ ಕೋಡ್ ಅನ್ನು ಮ್ಯಾನುವಲ್ ಆಗಿ ಇರಿಸುವುದು
● ಉತ್ಪನ್ನವು ಅಸಲಿ ಸೆಂಚುರಿಪ್ಲೈ ಉತ್ಪನ್ನವಾಗಿರದಿದ್ದಲ್ಲಿ, ನಿಮ್ಮ ಸ್ಕ್ರೀನ್ ಮೇಲೆ “ಸೆಂಚುರಿಪ್ಲೈ ಅಸಲಿ ಉತ್ಪನ್ನ ಅಲ್ಲ” ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ
● ಇ-ವಾರಂಟಿ ಅನ್ನು ಆ್ಯಪ್‌ನಿಂದಲೇ ನೀವು ಜನರೇಟ್ ಮಾಡಬಹುದು ಹಾಗೂ ನಿಮಗಾಗಿ ಅದರ ನಕಲುಪ್ರತಿಯೊಂದನ್ನು ಸೇವ್ ಮಾಡಿಕೊಳ್ಳಬಹುದು
● ನಿಮ್ಮ ಸಂಖ್ಯೆ ಹಾಗೂ ನೋಂದಾಯಿತ ಇ-ಮೇಲ್ ವಿಳಾಸದಲ್ಲಿಯೂ ಸಹ ಈ ಇ-ವಾರಂಟಿಯನ್ನು ನೀವು ಸ್ವೀಕರಿಸುತ್ತೀರಿ
● ಅದಷ್ಟೇ ಅಲ್ಲದೇ, ಪ್ಲೈವುಡ್‌ಗಳ ಮೇಲಿನ ಇತ್ತೀಚಿನ ಡೀಲ್‌ಗಳು ಮತ್ತು ಆಫರ್‌ಗಳ ಬಗ್ಗೆಯೂ ಸಹ ಸೆಂಚುರಿಪ್ರಾಮಿಸ್ ಆ್ಯಪ್‌ನಲ್ಲಿ ನೀವು ತಿಳಿದುಕೊಳ್ಳಬಹುದು
● ಇದರಲ್ಲಿ ಫೀಡ್‌ಬ್ಯಾಕ್ ಸೆಕ್ಷನ್ ಸಹ ಇದ್ದು, ಈ ಆ್ಯಪ್ ಅನ್ನು ಬಳಸುವುದರ ಬಗೆಗಿನ ನಿಮ್ಮ ಅನುಭವ, ಯಾವುದನ್ನು ಇನ್ನಷ್ಟು ಉತ್ತಮವಾಗಿಸಬಹುದು ಎಂಬ ಬಗ್ಗೆ ನೀವು ಬರೆಯಬಹುದು. ಹೀಗೆ ಸೆಂಚುರಿಪ್ಲೈ ಸುಧಾರಣೆಗಳನ್ನು ಮಾಡಿಕೊಂಡು, ತಮ್ಮ ಗ್ರಾಹಕರ ಅಗತ್ಯತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಅಷ್ಟೊಂದು ನಕಲಿ ಉತ್ಪನ್ನಗಳು ಇರುವ ಸಮಯದಲ್ಲಿ, ಸೆಂಚುರಿಪ್ರಾಮಿಸ್ ಆ್ಯಪ್ ವಿಶ್ವಾಸ ಮತ್ತು ಅಸಲಿತನದ ಒಂದು ಆಶಾಕಿರಣವಾಗಿದೆ. ಏನೊಂದೂ ಸಮಸ್ಯೆ ಇಲ್ಲದಂತೆ ಖಚಿತತೆಯನ್ನು ನಿಮಗೆ ನೀಡುವುದನ್ನು ಈ ಆ್ಯಪ್ ಖಚಿತಪಡಿಸಿಕೊಳ್ಳುತ್ತದೆ. ನೀವು ಕುಳಿತುಕೊಂಡು, ನಿಮ್ಮ ಪೂರೈಕೆಗಳನ್ನು ಬುಕ್ ಮಾಡಬಹುದು, ಅವುಗಳನ್ನು ಪಡೆದುಕೊಂಡು, ನಂತರ ಅವುಗಳ ಅಸಲಿತನವನ್ನು ಪರೀಕ್ಷಿಸಬಹುದು, ಇದೆಲ್ಲವನ್ನೂ ಮನೆಯಲ್ಲಿ ಕುಳಿತುಕೊಂಡೇ ಮಾಡಬಹುದು.
ಎಲ್ಲ ಗುತ್ತಿಗೆದಾರರು ಹಾಗೂ ಕಟ್ಟಡ ನಿರ್ಮಾಣ ವ್ಯಕ್ತಿಗಳ ಹೆಸರು ಕೆಡದಂತೆ ಸೆಂಚುರಿಪ್ರಾಮಿಸ್ ಆ್ಯಪ್ ರಕ್ಷಿಸುತ್ತದೆ ಹಾಗೂ ಯಾವುದೇ ರೀತಿಯ ಸಮಸ್ಯೆ ಅಥವಾ ಕಿರುಕುಳದಿಂದ ಗ್ರಾಹಕರನ್ನು ರಕ್ಷಿಸುತ್ತದೆ.
ನಕಲಿ ಪ್ಲೈ ಒಂದನ್ನು ಪಡೆದ ಸಂದರ್ಭದಲ್ಲಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಮಾರಾಟಗಾರರನ್ನು ಸಂಪರ್ಕಿಸಿ, ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಗ್ರಾಹಕರಿಗೆ ಸಲಹೆ ಮಾಡಲಾಗಿದೆ.